ಮೊಸಳೆ 1 -

ಕರ್ನಾಟಕ ರಾಜ್ಯದ ಹಾಸನ ತಾಲ್ಲೂಕಿನ ಒಂದು ಗ್ರಾಮ. ಹಾಸನ ಹೊಳೆನರಸೀಪುರ ಮಾರ್ಗದಲ್ಲಿ ಹಾಸನಕ್ಕೆ ದಕ್ಷಿಣದಲ್ಲಿ 12 ಕಿಮೀ ದೂರದಲ್ಲಿದೆ. ಜನಸಂಖ್ಯೆ 647 (1981). ಇಲ್ಲಿ ನಾಗೇಶ್ವರ ಮತ್ತು ಚನ್ನಕೇಶವ ಎಂಬ ಎರಡು ಪ್ರಸಿದ್ಧ ಹೊಯ್ಸಳ ದೇವಾಲಯಗಳಿವೆ. ನಾಗೇಶ್ವರ ದೇವಾಲಯದ ಶಿಖರದಲ್ಲಿ ಶಿವನ ವಿವಿಧ ರೂಪದ ಶಿಲ್ಪಗಳಿವೆ. ಸುಕನಾಸಿಯಲ್ಲಿ ಜಾಲಂಧ್ರಗಳಿವೆ. ಇಲ್ಲಿರುವ ಮನ್ಮಥರತಿಯ ಶಿಲ್ಪ ಗಮನಾರ್ಹವಾದುದ್ದು. ಗರ್ಭಗೃಹದಲ್ಲಿ ಸುಂದರ ಲಿಂಗವಿದೆ. ಚನ್ನಕೇಶವ ದೇವಾಲಯದಲ್ಲಿ ವೈಷ್ಣವ ಶಿಲ್ಪಗಳೇ ವಿಶೇಷ. ಪಟ್ಟಿಕೆಗಳ ಮೇಲಿನ ವಿಗ್ರಹಗಳಲ್ಲಿ ಗರುಡ, ಕೇಶವ, ವೇಣುಗೋಪಾಲ, ಗೋವರ್ಧನಧಾರಿ, ಅನಿರುದ್ಧ, ಶ್ರೀಧರ, ಬಲಿ. ವಾಮನ, ಅಚ್ಯುತ, ಲಕ್ಷ್ಮಿ ಜನಾರ್ಧನ ಮುಂತಾದ ಸುಂದರ ಶಿಲ್ಪಗಳಿವೆ. ಶಿಖರದಲ್ಲಿ ವಿಷ್ಣುವಿನ ವಿವಿಧ ರೂಪಗಳ ಶಿಲ್ಪಗಳಿವೆ. ಎರಡು ದೇವಾಲಯಗಳ ಗೋಪುರದ ಮುಂಭಾಗದಲ್ಲಿಯೂ ಹುಲಿಯೊಡನೆ ಹೋರಾಡುತ್ತಿರುವ ಸಳನ ಸುಂದರ ಕೆತ್ತನೆ ಇದೆ.													 						
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ